ತುಂಬು ಗರ್ಭಿಣಿ ಜೀವ ಉಳಿಸಲು ದೊಡ್ಡ ರಿಸ್ಕ್​ ತೆಗೆದುಕೊಂಡ ಗಂಡ; ಕೇರಳದಲ್ಲಿ ಭಯಾನಕ ವಿಡಿಯೋ ಸೆರೆ

author-image
Veena Gangani
Updated On
ತುಂಬು ಗರ್ಭಿಣಿ ಜೀವ ಉಳಿಸಲು ದೊಡ್ಡ ರಿಸ್ಕ್​ ತೆಗೆದುಕೊಂಡ ಗಂಡ; ಕೇರಳದಲ್ಲಿ ಭಯಾನಕ ವಿಡಿಯೋ ಸೆರೆ
Advertisment
  • ಪ್ರಾಣವನ್ನು ಪಣಕ್ಕಿಟ್ಟು ಹೆಂಡತಿಗಾಗಿ ಸೇತುವೆ ದಾಟಿದ ಗಂಡ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಈ ವಿಡಿಯೋ
  • ಸೇತುವೆ ಮೇಲೆ ಕಾರು ಚಲಿಸಿಕೊಂಡ ವ್ಯಕ್ತಿ ಬಗ್ಗೆ ನೆಟ್ಟಿಗರು ಏನಂದ್ರು?

ಭೀಕರ ಭೂಕುಸಿತದ ಹೊಡೆತಕ್ಕೆ ಕೇರಳ ಜನ ತತ್ತರಿಸಿ ಹೋಗಿದ್ದಾರೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಗುಡ್ಡದ ಭೂತ ಮರಣ ಮೃದಂಗ ಬಾರಿಸಿದ್ದು ಸಾವಿನ ಸಂಖ್ಯೆ 280ಕ್ಕೆ ದಾಟಿದೆ.

publive-image

ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ.. ರಾಜ್ಯದ 5 ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!

ಸಾವಿನ ಸುರಿ ಮಳೆಯಲ್ಲಿ ಬದುಕುಳಿದವರು ಹೋರಾಟ ನಡೆಸುತ್ತಿದ್ದಾರೆ. ಆದರೆ ಇದರ ಮಧ್ಯೆ ಭೂ ಕುಸಿತದ ಘಟನೆಯಲ್ಲಿ ಮನ ಕಲಕುವ ದೃಶ್ಯಗಳು ಬೆಳಕಿಗೆ ಬಂದಿದೆ. ಭಾರೀ ಮಳೆಯ ನಡುವೆ ಪತಿಯೂ ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಟ್ಟಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೌದು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.


">July 31, 2024

ವೈರಲ್​ ಆದ ವಿಡಿಯೋದಲ್ಲಿ ಏನಿದೆ?

ವೈರಲ್ ವಿಡಿಯೋದಲ್ಲಿ ನೀರಿನಿಂದ ತುಂಬಿ ಹರಿಯುತ್ತಿದ್ದ ಸೇತುವೆ ಮಧ್ಯೆ ತನ್ನ ಕಾರಿನಲ್ಲಿ ದಾಟೋ ಸಾಹಸ ಮಾಡಲಾಗಿದೆ. ವ್ಯಕ್ತಿಯೊಬ್ಬ ಪ್ರಾಣವನ್ನು ಪಣಕ್ಕಿಟ್ಟು ತನ್ನ ಗರ್ಭಿಣಿ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ತುಂಬು ಹರಿಯುತ್ತಿದ್ದ ಸೇತುವೆ ಮೇಲೆ ಮಾರುತಿ ಆಲ್ಟೋ ಕಾರನ್ನು ಚಲಿಸಿಕೊಂಡು ಹೋಗಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಏನೂ ಆಗಿಲ್ಲ. ಸದ್ಯ ಸೇತುವೆಯ ಇನ್ನೊಂದು ಬದಿಗೆ ಯಶಸ್ವಿಯಾಗಿ ತಲುಪಿದ್ದಾರೆ. ಕಳೆದ ಕೆಲವು ದಿನಗಳಿಂದ ಭಾರೀ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಮಳೆ ನಡುವೆಯೇ ಹೆಂಡತಿಗಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋದ ಗಂಡನ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment